ಸಂಶೋಧನಾ ಮಾರ್ಗದರ್ಶನವು ಪ್ರಾಮಾಣಿಕತೆ ಮತ್ತು ಉತ್ಕೃಷ್ಟತೆ ಹೊಂದಿರಬೇಕು-ಕುಲಪತಿ ಪ್ರೊ.ದೇಶಪಾಂಡೆ

ಸಂಶೋಧನಾ ಮಾರ್ಗದರ್ಶನವು ಪ್ರಾಮಾಣಿಕತೆ ಮತ್ತು ಉತ್ಕೃಷ್ಟತೆ ಹೊಂದಿರಬೇಕು-ಕುಲಪತಿ ಪ್ರೊ.ದೇಶಪಾಂಡೆ 




ಸುದ್ದಿ ಮಿತ್ರ
ಜಮಖಂಡಿ: ಸಂಶೋಧನಾ ಮಾರ್ಗದರ್ಶನವು ಪ್ರಾಮಾಣಿಕತೆ ಮತ್ತು ಉತ್ಕೃಷ್ಟತೆ ಹೊಂದಿರಬೇಕು. ಆಧುನಿಕ ಸಂಶೋಧನಾ ತಂತ್ರಗಳು ಮತ್ತು ನೈತಿಕ ಮಾನದಂಡಗಳನ್ನು ಅರಿತುಕೊಳ್ಳುವುದು ಮಹತ್ವದ್ದಾಗಿದೆ ಎಂದು ಬಾಗಲಕೋಟೆ ವಿವಿ ಕುಲಪತಿ ಪ್ರೊ.ಆನಂದ ಶರದ್ ದೇಶಪಾಂಡೆ ಹೇಳಿದರು.

ನಗರದಲ್ಲಿರುವ ಬಾಗಲಕೋಟೆ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಜರುಗಿದ ಸಂಶೋಧನಾ ಮಾರ್ಗದರ್ಶಕರಿಗೆ ಪ್ರಬೋಧನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಶೋಧನಾ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
 ಪ್ರೊ. ಶಿವಪ್ರಕಾಶ್ ಅವರು ಸಮಕಾಲೀನ ಸಂಶೋಧನಾ ವಿಧಾನಗಳು, ಹೊಸ ತಂತ್ರಜ್ಞಾನಗಳ ಬಳಕೆ ಹಾಗೂ ಗುಣಮಟ್ಟದ ಸಂಶೋಧನೆಯ ಅಗತ್ಯತೆಯನ್ನು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ. ದಯಾನಂದ ಜಿ. ಸಾವಕರ್, ಹಣಕಾಸು ಅಧಿಕಾರಿ ಡಾ. ಮಲ್ಲಿಕಾರ್ಜುನ ಎಂ. ಮರಡಿ, ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ನಿರ್ದೇಶಕರಾದ ಡಾ. ಚಿದಾನಂದ  ಡವಳೇಶ್ವರ ಸೇರಿದಂತೆ ಅನೇಕ ಪ್ರಾಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Post a Comment

0 Comments