ಹಿಂದು ಸಮಾಜಕ್ಕೆ ಸಂಘಟಿತ ಹೋರಾಟದ ಅವಶ್ಯಕತೆ ಇದೆ - ಶ್ರೀನಿವಾಸ ಜೀ

ಜಮಖಂಡಿ:ಹಿಂದೂ ಸಮಾಜ ಸಂಘಟಿತವಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ. ಜಾತಿ, ಸ್ವಾರ್ಥಭಾವನೆ ಬಿಟ್ಟು, ಒಗ್ಗಟ್ಟಾಗಬೇಕಿದೆ ಎಂದು ರಾ.ಸ್ವ.ಸಂಘ ಉತ್ತರ ಕರ್ನಾಟಕದ ಸಹ ಪ್ರಾಂತ ಪ್ರಚಾರಕ ಶ್ರೀನಿವಾಸ ಜೀ ತಿಳಿಸಿದರು. ಶನಿವಾರ ಸಂಜೆ ನಗರದ ಸಮಸ್ಕಾರ ಮಂಡಲಿಯ ಮೈದಾನದಲ್ಲಿ ವಿಜಯದಶಮಿ ಉತ್ಸವ ಹಾಗೂ ಪಥಸಂಚಲನದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಜಿಹಾದಿ ಶಕ್ತಿಗಳು, ಕಮ್ಯುನಿಷ್ಟರು, ಜಾತಿಗಳನ್ನು ಒಡೆಯುವಂತಹ ಜಾತಿಗಣತಿಯ ನೀತಿಗಳಿಂದ ಎಚ್ಚರಿಕೆ ಯಿಂದ ಇರಬೇಕು, ಸಮಾಜ ಒಗ್ಗಟ್ಟಾದರೆ ಯಾರಿಂದಲೂ ಏನೂ ಮಾಡಲಾಗುವದಿಲ್ಲ. ಒಡಕಾದರೇ ವಿಭಜನೆಯಾಗುತ್ತದೆ ಎಂಬ ಸತ್ಯವನ್ನು ಅರಿತು ಕೊಳ್ಳಬೇಕು ಅದಕ್ಕಾಗಿ ಪ್ರತಿಯೊಬ್ಬ ಸ್ವಯಂ ಸೇವಕ ತಮ್ಮ ಮನೆಗಳಿಂದ ಇಂಥಹ ವಿಚಾರಗಳನ್ನು ಸತ್ಸಂಗದ ಮೂಲಕ ತಿಳಿಸ ಬೇಕು ಎಂದು ಹೇಳಿದರು. ದೇಶದ ಇತಿಹಾಸ ಅವಲೋಕಿಸಿದಾಗ ಸ್ವಾರ್ಥಕ್ಕಾಗಿ ಹಿಂದೂಗಳೇ ಒಬ್ಬರಮೇಲೊಬ್ಬರು ಯುದ್ಧಗಳನ್ನು ಮಾಡಿದ್ದಾರೆ. ಕೊಲ್ಕತ್ತಾದಲ್ಲಿ ನಡೆದ ಸ್ವತಂತ್ರ್ಯ ಚಳುವಳಿಯಲ್ಲಿ ಹಿಂದೂ ಮುಸ್ಲಿಂರು ಒಗ್ಗಟ್ಟಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದರು, ಇದನ್ನರಿತ ಆಂಗ್ಲರು ಒಡೆದು ಆಳಲು ಪ್ರಾರಂಬಿಸಿದರು ಇದರಿಂದ ದೇಶಕ್ಕೆ ಹಿನ್ನಡೆಯಾಗಿ ದೇಶದ ವಿಭಜನೆ ಆಯಿತು. ನಮ್ಮಲ್ಲಿ ವಯಕ್ತಿಕ ಚಾರಿತ್ರ್ಯ, ದೈವ ಭಕ್ತಿ ಎಲ್ಲವು ಇದೆ ಆದರೆ ರಾಷ್ಟ್ರಚಾರಿತ್ಯ್ರದ ಕೊರತೆಇದೆ ಇದರಿಂದ ನಮ್ಮವರಿಂದಲೇ ನಮ್ಮ ಸಮಾಕ್ಕೆ ಹಾನಿಯಾಗಿದೆ. ಮತ್ತೊಂದು ಧರ್ಮದವರಿಗೆ ನೋವಾಗುತ್ತದೆ ಎಂದು ಹೇಳುವರೇ ಹಿಂದುಗಳು ಇದರಿಂದ ಸಮ್ಮ ಸಮಾಜ ಹಿಂದುಳಿಯಲು ಕಾರಣವಾಗಿದೆ. ಹಿಂದೂಗಳೆಲ್ಲರೂ ಒಂದೇ ಎಂಬ ಭಾವನೆ ಬರಬೇಕು ಇದೇ ಮನೋಭಾವವಿಟ್ಟುಕೊಂಡು ಸಂಘ ಕೆಲಸ ಮಾಡುತ್ತಿದೆ. 1.5ಲಕ್ಷಕ್ಕೂ ಹೆಚ್ಚು ಸೇವಾಕಾರ್ಯಗಳು ನಡೆಯುತ್ತಿವೆ. 48 ವಿವಿಧ ಸಂಘದ ಪರಿವಾರಗಳು ಕಾರ್ಯನಿರತವಾಗಿವೆ. ಬಲಿಷ್ಟ ಹಿಂದೂ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬ ಹಿಂದು ತನ್ನ ಸ್ವಾರ್ಥಬಿಟ್ಟು ದೇಶ ಮೊದಲು ಎಂಬ ಮನೋಭಾವ ದಿಂದ ಒಗ್ಗಟ್ಟಾಗಬೇಕು ಎಂದು ಹೇಳಿದರು.

ಪಥಸಂಚಲನ; ನಮಸ್ಕಾರ ಮಂಡಲಿ ಹಾಗೂ ಕುಂಚನೂರು ರಸ್ತೆಯಿಂದ ಎರಡು ಪ್ರತ್ಯೇಕ ತಂಡಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. ರಸ್ತೆಯುದ್ದಕ್ಕೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. 8 ಘೋಷವಾದ್ಯಮೇಳಗಳು, 4800 ಜನ ಗಣವೇಶಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು. ರಸ್ತೆಗಳನ್ನು ತೋರಣ, ರಂಗೋಲಿಗಳಿಂದ ಅಲಂಕರಿಸಲಾಗಿತ್ತು ಪುಟ್ಟ ಮಕ್ಕಳು ಭಾರತ ಮಾತೆಯ ಅಲಂಕಾರ ಮಾಡಿಕೊಂಡಿದ್ದರು. ಅಶೋಕವೃತ್ತದಲ್ಲಿ ಎರಡು ತಂಡಗಳ ಸಮಾಗಮವಾಗಿ ಅಲ್ಲಿಂದ ನಮಸ್ಕಾರ ಮಂಡಲಿಯ ಆವರಣದ ವರೆಗೆ ಪಥಸಂಚಲನ ನಡೆಯಿತು. ಪೊಲೀಸರು ಬಿಗಿ ಬಂದೊಬಸ್ತ ಏರ್ಪಡಿಸಿದ್ದರು.

ವೇದಿಕೆಯ ಮೇಲೆ ಕಲ್ಯಾಣಮಠ, ಓಲೆಮಠ, ಅವಧೂತಮಠದ ಸ್ವಾಮಿಗಳು, ಮುತ್ತೂರಿನ ಗರುಸಿದ್ದೇಶ್ವರಸ್ವಾಮಿಗಳು, ಅಕ್ಕಮಾದೇವಿ ಅಮ್ಮ, ಅನುಸೂಯಾಅಮ್ಮ, ವಿಶ್ವನಾಥ ಶಾಸ್ತ್ರೀಗಳು, ಶಿವಾನಂದ ಸ್ವಾಮಿಗಳು ಸೇರಿದಂತೆ ಹಲವು ಮಹಾಂತರು ವೇದಿಕೆಯಲ್ಲಿದ್ದರು.ಪಡಸಲಗಿಯ ಸಾವಯವ ಕೃಷಿಕ ಮಲ್ಲಿನಾಥ ಭುಜಬಲಿ ಮಾತನಾಡಿದರು. ನಗರಕಾರ್ಯವಾಹಕ ಮಲ್ಲಿಕಾರ್ಜುನ ಇಂಗಳಗಾಂವಿ ಸ್ವಾಗತಿಸಿದರು, ಶಿವಾನಂದ ಕಾಮತನವರ ನಿರೂಪಿಸಿದರು. ವಿಜಯ ಮಡಿವಾಳ ವಂದಿಸಿದರು.


Post a Comment

0 Comments