ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ
ಶಹಾಪುರ: ಪಾಠ ಕಲಿಯುತ್ತ ಕಿಲಕೀಲನೆ ನಗುನಗುತ್ತ ಸಹಪಾಠಿಗಳೊಂದಿಗೆ ಆಟವಾಡಬೇಕಿದ್ದ ಶಾಲಾ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ವಿಲಕ್ಷಣ ಹಾಗೂ ಅನಾಗರಿಕ ಘಟನೆಯಿಂದ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.
ನಗರದ ವಸತಿ ನಿಲಯವೊಂದರಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯೊಬ್ಬಳು ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಬುಧವಾರ ಮಧ್ಯಾಹ್ಮ ೨;೩೦ ಕ್ಕೆ ಸಹಜ ಹೆರಿಗೆಯಾಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಗರ್ಭಿಣಿಯಾಗಿರುವ ಬಗ್ಗೆ ಶಾಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೂ ತಿಳಿದಿರಲಿಲ್ಲ.
ಶಾಲಾ ದಾಖಲಾತಿಯ ಪ್ರಕಾರ ಬಾಲಕಿಗೆ ಇನ್ನೂ ೧೭ ವರ್ಷ ೭ ತಿಂಗಳಾಗಿದ್ದು ೯ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಶಾಲಾ ಬಾಲಕಿ ಗರ್ಭೀಣಿಯಾಗಿ, ಮಗುವಿಗೆ ಹೆರಿಗೆಯಾಗುವ ತನಕ ಆಕೆಯ ಪೋಷಕರು, ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ, ಶಾಲಾ ಶಿಕ್ಷಕರು ಅವಳ ದೇಹದಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಲಿಲ್ಲವೇ ಎಂಬ ಪ್ರಶ್ನೇ ಸಹಜವಾಗಿ ಮೂಡುತ್ತದೆ, ಅಲ್ಲದೇ ಸಿಬ್ಬಂದಿಗಳು ಎಲ್ಲಾ ಗೊತ್ತಿದ್ದರೂ ಕೂಡ ಕಾಣದಂತೆ ಇದ್ರಾ? ಎನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಹೆರಿಗೆ ಆದ ಕೂಡಲೇ ಪ್ರಾಂಶುಪಾಲರು ಮತ್ತು ನಿಲಯ ಪಾಲಕಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಯ ಈ ಪರಿಸ್ಥೀತಿಗೆ ಕಾರಣವಾದವನಿಗಾಗಿ ಹುಡುಕಾಟ ನಡೆಸಲಾಗಿದ್ದು, ಈ ಕುರಿತು ಮಕ್ಕಳ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ, ಎಸ್‌ಪಿ , ಡಿಡಿಪಿಐ, ತಹಸೀಲ್ದಾರ್, ಮಕ್ಕಳ ಆಯೋಗದ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪೋಷಕರಿಗೆ ಯಾವುದೇ ರೀತಿಯ ಭಯಪಡದಂತೆ ಧರ್ಯ ತುಂಬಿದರು.
ಈ ಘಟನೆಗೆ ಸಂಭಂದಿಸಿದ ಸಂಪೂರ್ಣವಾಗಿ ತನಿಖೆ ನಡೆಯುತ್ತಿದೆ. ವಸತಿ ನಿಲಯಗಳ ಆಡಳಿತ ಮತ್ತು ಮೇಲ್ವಿಚಾರಣೆಯಲ್ಲಿನ ಲೋಪಗಳ ಬಗ್ಗೆಯೂ ಪರಿಶೀಲಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ತಿಳಿಸಿದರು.
ವಸತಿ ನಿಲಯ ಮೇಲ್ವಿಚಾರಕರ ಬೇಜವಾಬ್ದಾರಿ ಕಾರಣವೇ;
ಬಾಲಕಿಯರ ವಸತಿ ನಿಲಯದಲ್ಲಿ ಪುರಷರಿಗೆ ಪ್ರವೇಶವಿಲ್ಲ. ಅವಳು ಹೇಗೆ ಗರ್ಭೀಯಾದಳು ಎಂಬುವುದೇ ನಮಗೆ ತಿಳಿದಿಲ್ಲ ಎನ್ನುವುದು ವಸತಿ ನಿಲಯದ ಮೇಲ್ವಿಚಾರಕರ ಹೇಳಿಕೆ. ಆರೋಗ್ಯ ಕಾರ್ಯಕರ್ತರು ವಸತಿ ನಿಲಯದಲ್ಲಿ ವಾಸಿಸುವ ಎಲ್ಲಾ ವಿದ್ಯಾರ್ಥಿಗಳನ್ನು ವಾರಕ್ಕೊಮ್ಮೆ ತಪಾಸಣೆ ಮಾಡಬೇಕು. ಆದರೆ ಆರೋಗ್ಯ ಕಾರ್ಯಕರ್ತೆ ತನ್ನ ಕೆಲಸವನ್ನು ಮಾಡುವುದಿಲ್ಲ ಎನ್ನುವುದಕ್ಕೆ ಈ ಘಟನೆಯಿಂದ ಸಾಬೀತಾಗಿದೆ.
ಬಾಲಕಿಯನ್ನ ಬಾಲ ಭವನಕ್ಕೆ ಸ್ಥಳಾಂತರ;
ಬಾಲಕಿಯನ್ನು ಬಾಲ ಭವನಕ್ಕೆ ಕಳುಯಿಸಲಾಗುವುದು. ಕರ್ತವ್ಯಲೋಪ ವೇಸಗಿದ ಅಧಿಕಾರಿಗಳು ಯಾರೆ ಆಗಿದ್ದರು ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ಇದರಲ್ಲಿ ಯಾರನ್ನು ಬಚಾವ್ ಮಾಡುವ ಪ್ರಶ್ನೇಯೇ ಇಲ್ಲಾ. ಈ ಕುರಿತು ಎಲ್ಲಾ ಆಯಾಮದಲ್ಲಿಯೂ ಕಾನೂನಾತ್ಮಕ ತನಿಖೆ ಮಾಡಿ, ಬಾಲಕಿಯ ವೈದ್ಯಕೀಯ, ಹಾಜರಾತಿ, ಗೈರು ಎಲ್ಲದರು ಕುರಿತು ತನಿಖೆ ಮಾಡಲಾಗುವುದು.
ಬೋಯರ್ ಹರ್ಷಲ್ ನಾರಾಯಣರಾವ್. ಜಿಲ್ಲಾಧಿಕಾರಿ
ಸುಮಾರು ೨ ತಿಂಗಳ ಹಿಂದಷ್ಟೇ ವಿದ್ಯಾರ್ಥಿನಿಯು ವಸತಿ ನಿಲಯಕ್ಕೆ ಬಂದಿದ್ದಾರೆ. ಬಾಲಕಿಯು ೯ ತಿಂಗಳ ತುಂಬು ಗರ್ಭೀಯಾಗಿದ್ದರು, ಈ ಬಗ್ಗೆ ಪೋಷಕರೇ ಮುಚ್ಚಿಟ್ಟಿದ್ದಾರೆ. ವಸತಿ ನಿಲಯದಲ್ಲಿ ಒಂದು ಕೋಣೆಯಲ್ಲಿ ೧೪-೧೫ ವಿದ್ಯಾರ್ಥಿಗಳು ಇದ್ದರು. ಆದರೂ ವಸತಿ ನಿಲಯದ ಸಿಬ್ಬಂದಿಗಳ ಗಮನಕ್ಕೆ ಬಂದಿಲ್ಲಾ. ಈ ಘಟನೆಯ ಕುರಿತು ಸಮಗ್ರ ತನಿಖೆ ಹಂತದಲ್ಲಿದೆ.
ಪೃಥ್ವಿಕ್ ಶಂಕರ್. ಎಸ್‌ಪಿ.
ಶಾಲಾ ಮುಖ್ಯೋಪಾಧ್ಯಾಯ ಸೇರಿದಂತೆ ಶಿಕ್ಷಕರು ಅಮಾನತು.
ಕರ್ತವ್ಯ ಲೋಪವೇಸಗಿದ ಶಾಲೆಯ ಪ್ರಾಂಶುಪಾಲರಾದ ಬಸಮ್ಮ ಹಾಗೂ ನಿಲಯಪಾಲಕಿ ಗೀತಾ, ವಿಜ್ಞಾನ ಶಿಕ್ಷಕ ನರಸಿಂಹ ಮೂರ್ತಿ, ದೈಹಿಕ ಶಿಕ್ಷಕ ಶ್ರೀಧರ ಅವರನ್ನು ಅಮಾನತು ಮಾಡಿದ್ದು, ಅಮಾನತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೇ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲಾ ಎಂದು ಆಧೇಶಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ಧೇಶಕ ಕಾಂತರಾಜು ಅವರು ಆದೇಶಿಸಿ ಸೂಚಿಸಿದ್ದಾರೆ.
ಐವರ ವಿರುದ್ಧ ಪ್ರಕರಣ ದಾಖಲು;
ಈಗಾಗಲೇ ಪ್ರಾಂಶುಪಾಲರಾದ ಬಸಮ್ಮ ಪಾಟೀಲ್, ಆರೋಗ್ಯ ಸಿಬ್ಬಂದಿ ಕಾವೇರಮ್ಮ ದೇವಿದಾಸ್, ನಿಲಯಪಾಲಕಿ ಗೀತಾ ಸಾಲಿಮನಿ, ಬಾಲಕಿಯ ಸಹೋದರ ಶರಣಬಸವ, ಎ.೧ ಆರೋಪಿ ಸೇರಿ ಐವರ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
0 Comments