ಒಂದು ವೀಡಿಯೋ 14 ಕೋಟಿಗೂ ಹೆಚ್ಚು ವೀಕ್ಷಣೆ. ಮರು ಜೀವ ಪಡೆದ ಸೌಜನ್ಯ ಕೆಸ್! ದೇಶಾದ್ಯಂತ ಕಿಚ್ಚು ಎಬ್ಬಿಸಿದ ಸೌಜನ್ಯ ವಿಡಿಯೋ
ಸುದ್ದಿ ಮಿತ್ರ ಬೆಂಗಳೂರು:
ಸೌಜನ್ಯನಿಗೆ ನ್ಯಾಯ ಕೊಡಿಸುವಂತೆ ಹಲವಾರು ಸಂಘಟನೆಗಳು, ವಿದ್ಯಾರ್ಥಿಗಳು, ಮಹಿಳಾ ಹಕ್ಕು ಕಾರ್ಯಕರ್ತರು ಸಾಕಷ್ಟು ಪ್ರತಿಭಟನೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ ಸರ್ಕಾರ ಮಾಡಿರುವ ತನಿಖೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆಯೂ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದವು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ ರಾವ್ ಎಂಬ ವ್ಯಕ್ತಿಯನ್ನು ಆರೋಪಿಯಾಗಿ ಬಂಧಿಸಲಾಯಿತು.2018ರಲ್ಲಿ ಮಂಗಳೂರು ನ್ಯಾಯಾಲಯ ಆರೋಪಿಯನ್ನು ಆರೋಪಮುಕ್ತಗೊಳಿಸಿತು, ಏಕೆಂದರೆ ಸಾಕ್ಷಿಗಳ ಕೊರತೆ ಮತ್ತು ಪತ್ತೆ ಮಾಡಿದ ಮಾಹಿತಿಯಲ್ಲಿ ಸ್ಪಷ್ಟತೆಯ ಕೊರತೆ ಇತ್ತು.
ಈಗ ಯೂಟ್ಯೂಬರ್ ದೂತ ಸಮೀರ ಮಾಡಿರುವ ಸೌಜನ್ಯ ಕೆಸ್ ಕುರಿತಾದ ಒಂದು ವಿಡಿಯೋ ಆರು ದಿನದಲ್ಲಿ 14 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದು ದೇಶದಲ್ಲೇ ಹೊಸ ಸಂಚಲನ ಮೂಡಿಸಿ ದೇಶಾದ್ಯಂತ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಕೆಸ್ ಸದ್ದು ಮಾಡುತ್ತಿದ್ದು ಪೋಲಿಸ್ ಇಲಾಖೆಗೆ ದೊಡ್ಡ ತಲೆ ನೋವನ್ನು ಉಂಟುಮಾಡಿದೆ.
ರಾಜ್ಯಾದ್ಯಂತ ಹೈ ಅಲರ್ಟ್ ಅಗಿರುವಂತೆ ಪೋಲಿಸರಿಗೆ ಸೂಚಿಸಿದ ಡಿಜಿಪಿ: ವಿಡಿಯೋ ಸದ್ದು ಮಾಡುತ್ತಿದ್ದು ಈ ಪ್ರಕರಣ ಇನ್ನೂ ಹಲವು ಪ್ರಶ್ನೆಗಳನ್ನು ಅನುಮಾನಗಳು ಸಾರ್ವಜನಿಕರಲ್ಲಿ ಸೌಜನ್ಯನ ಕೆಸ್ ಕುರಿತು ಯಾವಾಗ ಬೇಕಾದರೂ ಹೋರಾಟ ಮಾಡಬಹುದು ಎಂಬ ಕಾರಣದಿಂದಾಗಿ ಪೋಲಿಸ್ ಇಲಾಖೆ ಅಲರ್ಟ ಗೆ ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಯೂಟ್ಯೂಬರ್ ದೂತ ಸಮೀರಗೆ ಜೀವ ಭಯ& ಪೋಲಿಸ್ ನೋಟಿಸ್ : ದಕ್ಷಿಣ ಕನ್ನಡ ಸೌಜನ್ಯ ಪ್ರಕರಣದ ಕುರಿತು ವಿಡಿಯೋ ಮಾಡಿದ ಸಮೀರ ಎಂ.ಡಿ ಗೆ ಪೋಲಿಸರು ನೋಟಿಸ್ ನೀಡಿದ್ದಾರೆ. ಬಳ್ಳಾರಿಯಿಂದ ಪೋಲಿಸರು ಆಗಮಿಸಿ ಬಂಧನಕ್ಕೆ ಮುಂದಾಗಿದ್ದರು.ವಿಚಾರಣೆಗ
ಸಹಕರಿಸುವುದಾಗಿ ಭರವಸೆ ನೀಡಿದ ಬಳಿಕ ಪೋಲಿಸರು ನೋಟಿಸ್ ನೀಡಿ ಹಿಂದಿರುಗಿದ್ದಾರೆ.
ಜೀವ ಭಯ: ಯೂಟ್ಯೂಬರ್ ಸಮೀರಿಗೆ ಪೋನ್ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಯಾವ ಕ್ಷಣದಲ್ಲೇ ನನಗೆ ಏನರೆ ಆಗಬಹುದು ಎಂದು ಫೇಸ್ಬುಕ್ ಲೈವ್ ಬಂದು ಸಮೀರ್ ಹೇಳಿಕೊಂಡಿದ್ದಾನೆ ಇತ್ತ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಸೂಕ್ತ ಭದ್ರತೆ ಒದಗಿಸುವ ಕಾರ್ಯ ಮಾಡಬೇಕೆಂದು ಸಾಮಾಜೀಕ ಜಾಲತಾಣದಲ್ಲಿ ಕಾಮೆಂಟ್ ಗಳ ಸುರಮಳೆ ಬರುತ್ತಿದೆ.

0 Comments