ಎಪ್ರಿಲ್‌ 2 ರಂದು ನೂತನ ಆರ್ಬನ್‌ ಬ್ಯಾಂಕ್‌ ಕಟ್ಟಡ ಉದ್ಘಾಟನೆ- ಅಧ್ಯಕ್ಷ ರಾಹುಲ ಕಲೂತಿ


ಎಪ್ರಿಲ್‌ 2 ರಂದು ನೂತನ ಆರ್ಬನ್‌ ಬ್ಯಾಂಕ್‌ ಕಟ್ಟಡ ಉದ್ಘಾಟನೆ- ಅಧ್ಯಕ್ಷ ರಾಹುಲ ಕಲೂತಿ

ಸುದ್ದಿ ಮಿತ್ರ ಜಮಖಂಡಿ:

 ನಗರದ ಎಪಿಎಂಸಿ ಯಾರ್ಡನಲ್ಲಿ ನೂತನವಾಗಿ ನಿರ್ಮಿಸಲಾದ ಅರ್ಬನ್‌ ಕೋ ಆಪ್‌ ಬ್ಯಾಂಕ.ಲಿ. ನ ಕಟ್ಟಡದ ಉದ್ಘಾಟನೆ ಎಪ್ರಿಲ 2 ಬುಧವಾರ ದಂದು ನಡೆಯಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ರಾಹುಲ ಕಲೂತಿ ತಿಳಿಸಿದರು. ಶುಕ್ರವಾರ ಸಂಜೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿ,ಕೆ.ಶಿವಕುಮಾರ ನೂತನ ಬ್ಯಾಂಕ್‌ನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕೊಲ್ಹಾಪುರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಸಾನಿಧ್ಯವಹಿಸುವರು, ಕಾನೂನು, ಸಂಸದಿಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ಬ್ಯಾಂಕ್‌ನ ಸಂಸ್ಥಾಪಕ ದಿ,ಅಪ್ಪಾರಾವ ಸಿಂಧೆಯವರ ಪುತ್ಥಳಿ ಅನಾವರಣವನ್ನು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಸಭಾ ಭವನವನ್ನು ಉದ್ಘಾಟಿಸಲಿದ್ದಾರೆ. ಅಥಣಿ ಶಾಸಕ ಲಕ್ಷ್ಮಣ ಸೌದಿ ಅವರು ಸಹಕಾರ ಧ್ವಜಾರೋಹಣ ನೆರವೇರಿಸಲಿದ್ದು, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಆಡಳಿತ ಕಚೇರಿ ಉದ್ಘಾಟಿಸಲಿದ್ದಾರೆ. ಜವಳಿ ಸಚಿವ ಬ್ಯಾಂಕ್‌ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡರ ನಾಮಫಲಕ ಅನಾವರಣ, ವಿಜಯಪುರ ಸಂಸದ ರಮೇಶ ಜಿಗಜಿನಗಿ ಲಾಕರ್‌ ಉದ್ಘಾಟನೆ, ಗುಲಬರ್ಗಾ ಸಂಸದ ರಾಧಾಕೃಷ್ಣ ದೊಡಮನಿ ಸಭಾಭವನ ಉದ್ಘಾಟನೆ, ರಾಜ್ಯಸಭಾ ಸದಸ್ಯ ನಾರಾಯಣ ಸಾ ಭಾಂಡಗೆ ಅವರು ನಿರ್ವಾಹಣ ಮಂಡಲಿ ಸದಸ್ಯರ ಸಭಾಭವನವನ್ನು ಉದ್ಘಾಟಿಸಲಿದ್ದು ಶಾಸಕರು, ಮಾಜಿ ಶಾಸಕರು ಸೇರಿದಂತೆ ಸಹಕಾರ ಸಂಘಗಳ ಅಧಿಕಾರಿಗಳು ನಿಬಂಧಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

150 ಗ್ರಾಮಗಳು ಹಾಗೂ ಮೂರು ಜಿಲ್ಲೆಯ ಜನಪ್ರತಿನಿಧಿಗಳನ್ನು ಸಾರ್ವಜನಿಕರನ್ನು, ಬ್ಯಾಂಕ್‌ನ ಸದಸ್ಯರನ್ನು ಆಹ್ವಾನಿಸಲಾಗಿದೆ. ಸುಮಾರು 45 ಸಾವಿರ ಜನರು ಸೇರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿದೆ. ಇನ್ನೂ 40 ಶಾಖೆಗಳನ್ನು ಪ್ರಾರಂಭಿಸಿದರೂ ಇದೇ ಕಟ್ಟಡದಲ್ಲಿ ಬ್ಯಾಂಕ್‌ನ ವ್ಯವಹಾರಗಳು ನಡೆಸ ಬಹುದಾಗಿದೆ ಎಂದು ಹೇಳಿದರು. ನಿರ್ದೇಶಕ ಕಿರಣ ಪಿಸಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, 28 ಸಾವಿರ ಜನ ಶೇರುದಾರರನ್ನು ಹೊಂದಿರುವ ಬ್ಯಾಂಕ್‌ ಸಾರ್ವಜನಿಕರ ನಂಬಿಕೆಗೆ ಪಾತ್ರವಾಗಿದೆ, 84 ವರ್ಷಗಳಿಂದ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ ಎಂದು ತಿಳಿಸಿದರು. ಕಾಡಪ್ಪ ಮಾಳಿ ಮಾತನಾಡಿ 1940 ರಲ್ಲಿ ಅಪ್ಪಾರಾವ ಸಿಂಧೇ, ಹಾಗೂ ಇಲ್ಲಿನ ಪಟವರ್ಧನ ಮಹಾರಾಜರು ಸೇರಿಕೊಂಡು ಪ್ರಾರಂಭಿಸಿದ ಬ್ಯಾಂಕ್‌ ಇಂದು ಬೃಹದಾಕಾರದಲ್ಲಿ ಬೆಳೆದು ನಿಂತಿದೆ. 345 ಕೋಟಿರೂ. ಠೇವಣಿ ಹೊಂದಿದ್ದು 85 ವರ್ಷ ದಿಂದ ಲಾಭದಲ್ಲಿ ನಡೆಯುತ್ತಿದೆ. ಎಂದರು. ಅಪ್ಪಾಸಾಹೇಬ ಸಿಂಧೇ ಮಾತನಾಡಿ 1940ರಲ್ಲಿ ಪ್ರಾರಂಭವಾದ ಬ್ಯಾಂಕ್‌ ಸೆಂರ್ಟಲ್‌ ಕೋ.ಆಪ್ ಹೆಸರಿನಲ್ಲಿತ್ತು. ಆಗಿನಿಂದ ಇಲ್ಲಿರುವ ಕಟ್ಟಡ ನೂರು ವರ್ಷ ಹಳೆಯದಾಗಿದ್ದರಿಂದ ಹೊಸ ಕಟ್ಟಡ ನಿರ್ಮಿಸಲಾಗಿದೆ ರಿಸೆಪ್‌ಷನ್‌, ಲಿಫ್ಟವ್ಯವಸ್ಥೆ, ಸಭಾಂಗಣ, ಗೆಸ್ಟರೂಮ್‌ಗಳು, ಗ್ಯಾಲರಿ, ಆಡಳಿತ ಬ್ಲಾಕ್‌, ಮ್ಯಾನೇಜ ಮೆಂಟ್‌ ಚೇಂಬರಗಳು, ಅಧ್ಯಕ್ಷರ ಕೊಠಡಿ, ಸದಸ್ಯರ ಕೊಠಡಿ, ಲೋನ್‌ ಸೆಕ್ಷನ್‌, ರಿಕರವರಿ, ಆಡಿಟ್‌, ಸೇರಿದಂದತೆ 4 ವಿಭಾಗಗಳನ್ನು ನಿರ್ಮಿಸಲಾಗಿದೆ. ಸೋಲಾರ್‌ ಸಿಸ್ಟಮ್‌ ಅಳವಡಿಸಲಾಗಿದೆ. ಯುರೋಪ್‌ ಮಾದರಿಯ ಕ್ಲಾಕ್‌ ಟವರ ನಿರ್ಮಿಸಲಾಗಿದ್ದು ಸಮಾರು 7 ಕೋಟಿಗೂ ಅಧಿಕ ಮೊತ್ತದಲ್ಲಿ ಬ್ಯಾಂಕ್‌ನ ನೂತನ ಕಟ್ಟಡ ನಿರ್ಮಾಣ ವಾಗಿದೆ ಎಂದು ವಿವರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಜಿ,ಎಸ್‌,ನ್ಯಾಮಗೌಡ, ಮಾತನಾಡಿದರು.

ನಿರ್ದೇಶಕ ಮಂಡಲಿಯ ಸದಸ್ಯರಾದ ಫಕ್ಕೀರಸಾಬ ಬಾಗವಾನ, ವಿರುಪಾಕ್ಷಯ್ಯ ಕಂಬಿ, ಅಪ್ಪಾಸಾಹೇಬ ಮನಗೂಳಿ, ಧರೆಪ್ಪ ತೇಲಿ, ಬಸವರಾಜ ಕಲೂತಿ, ಬಸವರಾಜ ಮಠಪತಿ, ಪ್ರಭುಲಿಂಗ ಜನವಾಡ, ನಂದೆಪ್ಪ ತಳವಾರ, ವೈಶಾಲಿ ಗೋಂಧಿ, ಶೋಭಾ ಅರಕೇರಿ, ಗಿರೀಶ ಬಾಂಗಿ, ಹಾಗೂ ಸಿಬ್ಬಂದಿಗಳು ಇದ್ದರು.

Post a Comment

0 Comments