ನೀರಾವರಿ ಯೋಜನೆಗೆ ಸರ್ಕಾರದ ಆದ್ಯತೆ, ನಮ್ಮನೀರು ನಮ್ಮ ಹಕ್ಕು ಹೋರಾಟ- ಡಿ.ಕೆ.ಶಿವಕುಮಾರ
ಸುದ್ದಿಮಿತ್ರ ಜಮಖಂಡಿ:
ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಿದೆ. ನಮ್ಮ ನೀರು ನಮ್ಮ ಹಕ್ಕು ಹೋರಾಟವನ್ನು ಪ್ರಾರಂಭಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು. ನಗರದಲ್ಲಿ ಬುಧವಾರ ನೂತನ ಅರ್ಬನ್ ಬ್ಯಾಂಕ್‌ನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಸಂಪೂರ್ಣ ಅನುಷ್ಠಾನ ಗೊಳಿಸಲು ಸರ್ಕಾರ ಬದ್ಧವಾಗಿದೆ. 524 ಮೀಟರ್ ನೀರು ಹಿಡಿದಿಟ್ಟುಕೊಳ್ಳಲು ಗೆಜೆಟ್ ನೋಟಿಫೀಕೇಷನ್ ಆಗಿಲ್ಲ ಆದ್ದರಿಂದ ಯೋಜನೆ ವಿಳಂಬವಾಗಿದೆ. ಗೆಜೆಟ್‌ನೋಟಿಫಿಕೇಷನ್ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡು ರೈತರ ಬದುಕನ್ನು ಹಸನಾಗಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.
ನೀರು ಸಮುದ್ರದ ಪಾಲಾಗಬಾರದು ಎಂಬ ಉದ್ದೇಶದಿಂದ ನೀರಾವರಿ ಇಲಾಖೆಗೆ 22 ಸಾವಿರ ಕೋಟಿರೂಗಳನ್ನು ನೀಡಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸಲಾಗುವದು, ಏತ ನೀರಾವರಿ ಯೋಜನೆಗಳಿಗೆ 216 ಕೋಟಿರೂ.ಗಳನ್ನು ನೀಡಲಾಗಿದೆ. ವೆಂಕಟೇಶ್ವರ ಏತನೀರಾವರಿ, ಮುಳವಾಡ ಏತನೀರಾವರಿ ಯೋಜನೆಗಳು ಚಾಲ್ತಿಯಲ್ಲಿವೆ. ಅಥಣಿ ತಾಲೂಕಿನಲ್ಲಿ 1480 ಕೋಟಿ ರೂ.ಗಳ ಏತನೀರಾವರಿ ಯೋಜನೆಯ ಕಾರ್ಯ ಪ್ರಗತಿಯಲ್ಲಿದ್ದು 9950 ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯ ಪಡೆಯಲಿದೆ. ತಾಲುಕಿನ ಹಿಪ್ಪರಗಿ ಸೇತುವೆ ಕಾಮಗಾರಿ ನಡೆದಿದ್ದು 60 ಕೋಟಿ.ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.
![]() |
ದೊಡ್ಡಬಜೆಟ್- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 4 ಲಕ್ಷ ಕೋಟಿರೂಗಳ ದಾಖಲೆ ಬಜೆಟ್ ನೀಡಿದ್ದು, ಇತಿಹಾಸ ಸೃಷ್ಠಿಯಾಗಿದೆ. ಎಲ್ಲರಿಗೂ ಸಮಬಾಳು ಸಮಪಾಲು ಎನ್ನುವ ಸಹಕಾರಿ ತತ್ವದ ಮೇಲೆ ಪಕ್ಷ ಆಡಳಿತ ನಡೆಸುತ್ತಿದೆ.
ಗ್ಯಾರಂಟಿ ಯೋಜನೆ - ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ರಾಜ್ಯದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕಾಗಿ 52 ಸಾವಿರಕೋಟಿ ಕರ್ಚು ಮಾಡುತ್ತಿದ್ದೇವೆ. ಇದರಿಂದ ರಾಜ್ಯದ ಬಡ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗಿದೆ. ಅನೇಕರ ಶಿಕ್ಷಣ, ಉದ್ಯೋಗ, ಸ್ವಾವಲಂಬಿ ಬದುಕಿಗೆ ಸಹಾಯವಾಗಿದೆ. ತಿಂಗಳಿಗೆ 20 ಸಾವಿರರೂಳ ಆದಾಯವನ್ನು ಮಹಿಳೆಯರು ರೊಟ್ಟಿ ಮಾರಾಟ ಮಾಡಿ ಗಳಿಸುತ್ತಿದ್ದಾರೆ. 1.22 ಲಕ್ಷ ಮಹಿಳೆಯ ಬದುಕು ಬದಲಾವಣೆಯಾಗಿದೆ ಎಂದು ಹೇಳಿದರು.
ನಂದಿನಿಹಾಲು- ರಾಜ್ಯದ ರೈತರ ಉತ್ಪಾದನೆಯ ನಂದಿನಿ ಹಾಲು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಶೇ.90 ರಷ್ಟು ಹಾಲನ್ನು ಸಹಕಾರ ಸಂಘಗಳಿಂದ ಹಂಚಿಕೆ ಮಾಡಲಾಗುತ್ತಿದ್ದು ರೈತ ವರ್ಗಕ್ಕೆ ಅನುಕೂಲ ಕಲ್ಪಿಸಲಾಗಿದೆ. ಹೈನುಗಾರಿಕೆಗೆ ಉತ್ತೇಜನ ನೀಡಲಾಗಿದೆ ಎಂದರು.
ರೇಶ್ಮೆ ಬೆಳೆಯಿರಿ- ರೇಶ್ಮೆ ಬೆಳೆದು ಹೆಚ್ಚು ಆದಾಯ ಗಳಿಸಬಹುದಾಗಿದ್ದು ರೈತರು ರೇಶ್ಮೆ ಬೆಳೆಯಲು ಮುಂದಾಗಬೇಕು, ಇದರಿಂದ ರೈತರ ಆರ್ಥಿಕ ಶಕ್ತಿ ಹೆಚ್ಚಲಿದೆ ಸರ್ಕಾರ ರೇಶ್ಮೆ ಬೆಳೆಗೆ ಸಾಕಷ್ಟು ಸಹಾಯ ನೀಡುತ್ತಿದೆ ಎಂದು ತಿಳಿಸಿದರು.
ಮತ್ತೆ ಅಧಿಕಾರಕ್ಕೆ- 2028 ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಉತ್ತರಕರ್ನಾಟಕದ ಜನ ಹೃದಯ ಶ್ರೀಮಂತರು. ಮಾಜಿ ಶಾಸಕರಾದ ದಿ.ರಾಮಣ್ಣ ಕಲೂತಿ, ದಿ.ಸಿದ್ಧು ನ್ಯಾಮಗೌಡರು ಬಹಳ ಆತ್ಮೀಯರಾಗಿದ್ದರು. ಅವರೊಂದಿಗೆ ಉತ್ತಮವಾದ ವಡನಾಟವಿತ್ತು, ಸಹಕಾರ ಸಚಿವ ನಾಗಿದ್ದಾಗ ಹಾಗೂ ಜಮಖಂಡಿ ಶುಗರ್ಸ ಕಾರ್ಖಾನೆಯ ಉದ್ಘಾನೆಗೆ ಬಂದಿದ್ದು ನೆನಪಿ ಎಂದು ಹೇಳಿದರು.
ಸಚಿವರಾದ ಆರ್.ಬಿ.ತಿಮ್ಮಾಪೂರ, ಶಿವಾನಂದ ಪಾಟೀಲ, ಶಾಸಕರಾದ ಲಕ್ಷ್ಮಣ ಸೌದಿ, ಜಗದೀಶಗುಡಗುಂಟಿ, ಮಹಮದ್ ಹ್ಯಾರಿಸ್ ನಡಪಾಲ, ಮಾಜಿ ಶಾಸಕ ಆನಂದ ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ, ಜಿ.ಎಸ್.ನ್ಯಾಮಗೌಡ, ಮಾಜಿ ಸಚಿವ ಮುರಗೇಶ ನಿರಾಣಿ, ಎಸ್.ಆರ್.ಪಾಟೀಲ, ಕೊಲ್ಲಾಪುರ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳು, ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು, ಹುಲ್ಯಾಳದ ಹರ್ಷಾನಂದ ಸ್ವಾಮಿಗಳು, ಕಲ್ಯಾಣ ಮಠದ ಗೌರಿಶಂಕರ ಸ್ವಾಮಿಗಳು ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ್ ಕಲೂತಿ, ಉಪಾಧ್ಯಕ್ಷ ಮಾಮೂನ ರಶೀದ ಪಾರ್ಥನಳ್ಳಿ , ನಿರ್ದೇಶಕರು, ಸಿಬ್ಬಂದಿಗಳು ಸೇರಿದಂತೆ ಗಣ್ಯರು ವೇದಿಕೆಲ್ಲಿದ್ದರು.



0 Comments