ಭಾರತ vs ಪಾಕ್ 136 ಏಕ ದಿನ ಪಂದ್ಯಗಳಲ್ಲಿ ಮುಖಾಮುಖಿ ಭಾರತ 55 ಪಾಕಿಸ್ತಾನ 73
ಕ್ರೀಡಾ ಇತಿಹಾಸದಲ್ಲಿಯೇ ಅತ್ಯಂತ ಪ್ರಸಿದ್ದ ಮತ್ತು ಅತ್ಯಂತ ತೀವ್ರ ಪೈಪೋಟಿಯ ಎದುರಾಳಿಗಳು ಭಾರತ ಮತ್ತು ಪಾಕಿಸ್ತಾನ.ಪಂದ್ಯ ಹೇಗೇ ನಡೆದರೂ, ಆ ಪಂದ್ಯಾವಳಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೇ ಅತಿದೊಡ್ಡ ಪಂದ್ಯವಾಗುತ್ತದೆ. 2019 ರ ವಿಶ್ವಕಪ್ ನಲ್ಲಿ 706 ಮಿಲಿಯನ್ ವೀಕ್ಷಕರು ಕೂಟ ವೀಕ್ಷಿಸಿದ್ದಾರೆ ಎಂದು ಐಸಿಸಿ ಹೇಳಿತ್ತು. ಆದರೆ ಅದರಲ್ಲಿ 273 ಮಿಲಿಯನ್ ಭಾರತ-ಪಾಕಿಸ್ತಾನ ಪಂದ್ಯದಿಂದಲೇ ಬಂದಿವೆ. ಎರಡೂ ತಂಡಗಳು ಈಗ ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಏಕದಿನ ಕ್ರಿಕೆಟ್ ನಲ್ಲಿ ಇತಿಹಾಸ ಕೆದಕುತ್ತಾ ಹೋದರೆ ಪಾಕಿಸ್ತಾನವೇ ಹೆಚ್ಚಿನ ಪಂದ್ಯಗಳನ್ನು ಗೆದ್ದಿದೆ. ಆದರೂ ಕಳೆದ ದಶಕದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. 2010 ಮತ್ತು 2020 ರ ನಡುವೆ ಎರಡೂ ತಂಡಗಳ ನಡುವೆ ನಡೆದ 14 ಪಂದ್ಯಗಳಲ್ಲಿ
ಭಾರತ 10 ಪಂದ್ಯಗಳನ್ನು ಗೆದ್ದಿದೆ. ಒಟ್ಟಾರೆಯಾಗಿ ಎರಡೂ ತಂಡಗಳು 136 ಬಾರಿ ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಪಾಕಿಸ್ತಾನ 73 ಬಾರಿ ಗೆದ್ದರೆ, ಭಾರತ 55 ಬಾರಿ ಗೆದ್ದಿದೆ. 2013 ರವರೆಗೆ ನಡೆದ 17 ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ, ಪಾಕಿಸ್ತಾನ 11 ರಲ್ಲಿ ಗೆದ್ದರೆ, ಭಾರತ ಕೇವಲ ಐದು ಬಾರಿ ಗೆದ್ದಿದೆ.

ಭದ್ರತಾ ಕಾರಣಗಳಿಗೆ ದುಬೈನಲ್ಲಿ ಈ ಮ್ಯಾಚ್ ನಡೆಯುತ್ತಿದ್ದು, ಪಂದ್ಯ ನೋಡಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬರೋದು ಗ್ಯಾರಂಟಿನಾ? ಅನ್ನೋ ಚರ್ಚೆ ಜೋರಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಕೂಡ ನಡೆಯುತ್ತಿದೆ. ಅಲ್ಲದೆ ಇದೇ ಪಂದ್ಯಕ್ಕಾಗಿ ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

0 Comments