ಭಾರತ- ಪಾಕ್ ಹೈ ವೋಲ್ವೇಜ್ ಪಂದ್ಯ ಕ್ರಿಕೆಟ್ ವಿಶ್ವವನ್ನೇ ವ್ಯಾಪಿಸಲಿದೆ

 ಭಾರತ- ಪಾಕ್ ಹೈ ವೋಲ್ವೇಜ್ ಪಂದ್ಯ ಕ್ರಿಕೆಟ್ ವಿಶ್ವವನ್ನೇ ವ್ಯಾಪಿಸಲಿದೆ



ದುಬೈ: ಇಂದು ನಡೆಯಲ್ಲಿರುವ ಭಾರತ- ಪಾಕ್ ಪಂದ್ಯ
ಕ್ರಿಕೆಟ್ ವಿಶ್ವವನ್ನೇ ವ್ಯಾಪಿಸಲಿದೆ. ಹೈ ವೋಲ್ವೇಜ್ ಪಂದ್ಯಕ್ಕೆ ಭಾರತ-ಪಾಕಿಸ್ಥಾನ ತಂಡಗಳು ಸಾಕ್ಷಿಯಾಗಲಿವೆ. ದುಬೈ ಯಲ್ಲಿ ನಡೆಯುವ ರೋಹಿತ್ -ರಿಜ್ವಾನ್ ಪಡೆಗಳ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಕಣ್ಣುಂಬಿಸಿಕೊಳ್ಳಲು ಕ್ರಿಕೆಟ್‌ ಜಗತ್ತೇ ತುದಿಗಾಲಲ್ಲಿ ನಿಂತಿದೆ.

 3 ದಶಕಗಳ ಬಳಿಕ ಐಸಿಸಿ ಪಂದ್ಯಾವಳಿಯೊಂದರ ಆತಿಥ್ಯ ಪಡೆದಿರುವ ಪಾಕಿಸ್ಥಾನವು ತನ್ನ ಉಳಿವಿಗಾಗ
 ಹೋರಾಟ. ನಡೆಸಬೇಕಾದ ಸಂಕಟದಲ್ಲಿದೆ. ಎರಡೇ ಪಂದ್ಯಗಳನಾಡಿ ಹೋರಬಿಳುವುದನ್ನು ತಪ್ಪಿಸಿಕೊಳ್ಳಲು ಪರಿದಾಡುತ್ತಿದೆ.ಬದ್ದ ವೈರಿಗಳ ನಡುವೆ ನಡೆಯುವ ಈ ಪಂದ್ಯದಲ್ಲಿ ಎದುರಾಳಿ ಕೈಯಲ್ಲಿ ಸೋಲುವುದನ್ನು  ಭಾರತವೂ ಬಯಸದು.ಹೀಗಾಗಿ ಇದು ಮ್ಯಾಚ್ ಆಪ್ ದ ಟೂರ್ನಿಯ ಮಹತ್ವ ಪಡೆದಿದೆ.

ಭಾರತಕ್ಕೆ ಇಲ್ಲಿ ಮತ್ತೂಂದು ಕೆಲಸ ಬಾಕಿ ಇದೆ. ಅದೆಂದರೆ 2017ರ ಫೈನಲ್ ಪಂದ್ಯಕ್ಕೆ ಸೇಡು ತೀರಿಸಿಕೊಳ್ಳುವುದು. ಅಂದಿನ ಓವಲ್ ಫೈನಲ್‌ನಲ್ಲಿ ಭಾರತ ಪಾಕ್ ಕೈಯಲ್ಲಿ 180 ರನ್ನುಗಳ ಆಘಾತಕಾರಿ ಸೋಲುಂಡಿತ್ತು! ಪಾಕ್ ಹೆಡೆಮುರಿ ಕಟ್ಟಲು ಇದೊಂದು ಪಂದ್ಯ ಭಾರತಕ್ಕೆ ಸುವರ್ಣಾವಕಾಶ ದೊರೆತಿದ್ದು ಇದಕ್ಕಾಗಿ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.

ಈಗಾಗಲೇ ಮೊದಲ ಪಂದ್ಯದಲ್ಲಿ ಸೋಲನ್ನು ಕಂಡಿರುವ ಪಾಕ್‌ಗೆ ಈ ಪಂದ್ಯ ಮಾಡು ಇಲ್ಲ ಮಡಿಯಂತಾಗಿದೆ. ಒಂದು ವೇಳೆ ಈ ಪಂದ್ಯದಲ್ಲೂ ಸೋಲನುಭವಿಸಿದರೆ ಫೈನಲ್ ಕನಸು ಭಗ್ನಗೊಳ್ಳಲಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಪಾಕ್ ಮುಖಾಮುಖಿಯಾಗಿದ್ದ ಪಂದ್ಯ-05 ಭಾರತ ಜಯ-02 ಪಾಕ್ ಜಯ-03

ಸಂಭಾವ್ಯ ತಂಡಗಳು-ಭಾರತ : ರೋಹಿತ್ ಶರ್ಮಾ (ನಾಯಕ), ಶುಭಮ್ ಗಿಲ್‌, ವಿರಾಟ್ ಕೊಹ್ಲಿ, ಅಕ್ಷರ್ ಪಟೇಲ್‌, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ/ಕುದ್ದೀಪ್ ಯಾದವ್, ಹರ್ಷಿತ್ ರಾಣಾ.

Post a Comment

0 Comments