ವಿದ್ಯುತ್ ಬಳಕೆದಾರರಿಗೆ ಬಿಗ್ ಶಾಕ್ 💡ಗೃಹ ಜ್ಯೋತಿ ಶುಲ್ಕ ವಸೂಲಿಗೆ ಸಿದ್ದತೆ
ಸುದ್ದಿ ಮಿತ್ರ:

ಗೃಹ ಜ್ಯೋತಿ ಸಬ್ಸಿಡಿ ಹಣವನ್ನು ರಾಜ್ಯ ಸರ್ಕಾರ ಮುಂಗಡವಾಗಿ ಪಾವತಿಸದಿದ್ದರೆ ಫಲಾನುಭವಿ ವಿದ್ಯುತ್ ಬಳಕೆದಾರರಿಂದಲೇ ಎಸ್ಕಾಂಗಳು ಶುಲ್ಕ ಸಂಗ್ರಹಿಸಬಹುದು ಎಂಬ ಆದೇಶ ಮಾಡಲಿದೆಯೇ ಎಂಬ ಆತಂಕ ಶುರುವಾಗಿದೆ.
ಈಗಾಗಲೇ ದರ ಪರಿಷ್ಕರಣೆಗೆ ಮನವಿ ಮಾಡಿರುವ ಎಸ್ಕಾಂಗಳು ಗೃಹ ಜ್ಯೋತಿ ಸಬ್ಸಿಡಿ ಹಣವನ್ನು ಸರ್ಕಾರ ಮುಂಗಡವಾಗಿ ಪಾವತಿಸುವಂತೆ ಮಾಡಬೇಕು ಎಂದು ಕೆಇಆರ್‌ಸಿಯನ್ನು ಕೋರಿವೆ. 'ರಾಜ್ಯ ಸರ್ಕಾರವು 200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಗೃಹ ಬಳಕೆದಾರರಿಗೆ ಸಬ್ಸಿಡಿ ಯೋಜನೆ ಜಾರಿ ಮಾಡಿದೆ. ರಾಜ್ಯ ಸರ್ಕಾರ ಈ ಸಬ್ಸಿಡಿ ಹಣವನ್ನು ಮುಂಗಡವಾಗಿ ಎಸ್ಕಾಂಗಳಿಗೆ ಪಾವತಿಸಬೇಕು. ಇಲ್ಲದಿದ್ದರೆ ಕೆಇಆರ್‌ಸಿ (ಸಬ್ಸಿಡಿ ಪಾವತಿ) ನಿಯಮಗಳು-2008ರ ನಿಯಮ 6.1 ರ ಅಡಿ ಬಳಕೆ ಮಾಡಿರುವ ಗ್ರಾಹಕರಿಂದ ಒತ್ತಾಯದಿಂದ ಸಂಗ್ರಹಿಸಲು ಅವಕಾಶ ನೀಡಬೇಕು' ಎಂದು ಎಸ್ಕಾಂಗಳು ಮನವಿ ಸಲ್ಲಿಸಿವೆ. ಈ ಮನವಿಯನ್ನು ಕೆಇಆರ್‌ಸಿ ಪುರಸ್ಕರಿಸುವ ಸಾಧ್ಯತೆ ಕಡಿಮೆ. ಒಂದೊಮ್ಮೆ ಪುರಸ್ಕರಿಸಿದರೆ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಲಾಭಪಡೆಯುತ್ತಿರುವ 1.70 ಕೋಟಿ ಗ್ರಾಹಕರಿಗೆ ಹೊಸ ಶಾಕ್ ಕಾದಿದೆ.

ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯಡಿ 1,70,90,681 ಅರ್ಹ ಬಳಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ. 1.65 ಕೋಟಿ ಕುಟುಂಬಗಳಿಗೆ ಇದರಡಿ ಶೂನ್ಯ ಬಿಲ್ ಬರುತ್ತಿದೆ. ಕೇವಲ ಬೆಸ್ಕಾಂ ವ್ಯಾಪ್ತಿಯಲ್ಲೇ 71 ಲಕ್ಷ ಗ್ರಾಹಕರು ಗೃಹಜ್ಯೋತಿ ಫಲಾನುಭವಿಗಳಾಗಿದ್ದಾರೆ. ಫಲಾನುಭವಿಗಳಿಗೆ ಪ್ರತಿ ವರ್ಷ ರಾಜ್ಯ ಸರ್ಕಾರ 1,602 ಕೋಟಿ ರು. ಸಬ್ಸಿಡಿಯನ್ನು ಎಸ್ಕಾಂಗಳಿಗೆ ಪಾವತಿಸಬೇಕು. ಆದರೆ ಪ್ರತಿ ಬಾರಿಯು ರಾಜ್ಯ ಸರ್ಕಾರ ಮುಂಗಡ ಅಥವಾ ಸಕಾಲಕ್ಕೆ ಪಾವತಿ ಮಾಡದೆ 3-4 ತಿಂಗಳು ಬಾಕಿ ಉಳಿಸಿಕೊಂಡೇ ಪಾವತಿಸುತ್ತಿದೆ. ಇದೀಗ ಕೆಇಆರ್‌ಸಿ-2008ರ ನಿಯಮ 6.1 ಅನುಷ್ಠಾನ ಮಾಡಿದರೆ, ರಾಜ್ಯ ಸರ್ಕಾರ ಮುಂಗಡವಾಗಿ ಸಬ್ಸಿಡಿ ಹಣ ಪಾವತಿಸಬೇಕು. ಇಲ್ಲದಿದ್ದರೆ ಫಲಾನುಭವಿಗಳೇ ಮೊದಲು ಎಸ್ಕಾಂಗಳಿಗೆ ಪಾವತಿಸಿ ಬಳಿಕ ರಾಜ್ಯ ಸರ್ಕಾರದಿಂದ ಸಬ್ಸಿಡಿ ಕ್ಲೇಮ್ ಮಾಡಿಕೊಳ್ಳಬೇಕಾಗುತ್ತದೆ.
ಈಗಾಗಲೇ ಇರುವ ಬೆಸ್ಕಾಂ ಸೇರಿ ರಾಜ್ಯದ ವಿವಿಧ ಎಸ್ಕಾಂಗಳು ಮುಂದಿನ ಮೂರು ವರ್ಷಗಳ ಅವಧಿಯ ವಿದ್ಯುತ್ ದರ ಹೆಚ್ಚಳವನ್ನು ಒಂದೇ ಬಾರಿಗೆ ಪ್ರಕಟಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿದ್ದು, ಪ್ರತಿ ಯುನಿಟ್‌ಗೆ 37 ಪೈಸೆಯಿಂದ ಬರೋಬ್ಬರಿ 1.32 ರು.ವರೆಗೆ ಹೆಚ್ಚಳಕ್ಕೆ ಮನವಿ ಮಾಡಿದೆ.
ಮಾರ್ಚ್‌ಗೆ 3 ವರ್ಷದ ಎಲೆಕ್ಟಿಕ್ ಶಾಕ್ ಫಿಕ್ಸ್ಒಮ್ಮೆಗೆ 3 ವರ್ಷದ ದರ ಏರಿಕೆ ಘೋಷಣೆಯುನಿಟ್‌ಗೆ 37 ಪೈ- ₹1.32ವರೆಗೆ ಹೆಚ್ಚಳ? ಏ.1ರಿಂದ ಹೊಸ ವಿದ್ಯುತ್ ದರ ಸಂಭವ ಇದೆ.
ಸುದ್ದಿ ಮಿತ್ರ ವರದಿ ಅಪ್ಪು ಪೋತರಾಜ
0 Comments