ವಿಶ್ವವಿದ್ಯಾಲಯ ಯಥಾಸ್ಥಿತಿಯಲ್ಲಿ ಮುಂದುವರೆಯಲಿ ವಿಲೀನ ಬೇಡ- ಬಾಂಗಿ
ಸುದ್ದಿಮಿತ್ರ ಜಮಖಂಡಿ;
ಬಾಗಲಕೋಟೆ ವಿಶ್ವವಿದ್ಯಾಲಯ ಯಥಾಸ್ಥಿತಿಯಲ್ಲಿ ಮುಂದುವರೆಸಬೇಕು, ವಿಲೀನ ಗೊಳಿಸುವದು ಬೇಡ ಎಂದು ಹಿರಿಯ ನ್ಯಾಯವಾದಿ, ತಾತಾಸಾಹೇಬ ಬಾಂಗಿ ಸರ್ಕಾರವನ್ನು ಆಗ್ರಹಿಸಿದರು. ನಗರದ ದೇಸಾಯಿ ವೃತ್ತದಲ್ಲಿ ವಿವಿಯ ಉಳುವಿಗಾಗಿ ವಿದ್ಯಾರ್ಥಿಗಳು ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು. ಅಳಿಯ ಅಲ್ಲ ಮಗಳಗಂಡ ಎಂಬಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತನಾಡಿದ್ದಾರೆ. ರದ್ದು ಗೊಳಿಸುವದಿಲ್ಲ ಬದಲಿಗೆ ವಿಲೀನ ಗೊಳಿಸುತ್ತೇವೆ ಎಂದು ಆದರೆ ಜಮಖಂಡಿಯಲ್ಲಿ 5 ನೇ ಶತಮಾನದಕಾಲದಲ್ಲಿ ಜೈನ ಗುರುಕುಲ ವಿತ್ತು ಇಲ್ಲಿಯೇ ಮಹಾಕವಿ ರನ್ನ ವಿದ್ಯಾಅಭ್ಯಾಸ ಮಾಡಿದ್ದಾರೆ.
12ನೇ ಶತಮಾನದಲ್ಲಿ ಇಲ್ಲಿ ಒಂದು ವಿಶ್ವವಿದ್ಯಾಲಯವಿತ್ತು ಎಂಬುದಕ್ಕೆ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಶಿಲಾಶಾಸನ ದೊರೆತಿದೆ ಇಂಥಹ ಐತಿಹಾಸಿಕ ಹಿನ್ನೆಲೆಯುಳ್ಳ ಜಮಖಂಡಿಗೆ ಸ್ನಾತಕೊತ್ತರ ಕೇಂದ್ರ ವಿವಿಯನ್ನು ಹೋರಾಟದ ಮೂಲಕ ತಂದು ಕೊಂಡಿದ್ದೇವೆ. ಯಾವುದೇ ಕಾರಣಕ್ಕೆ ಅದನ್ನು ರದ್ದು ಅಥವಾ ವಿಲೀನ ಗೊಳಿಸಲು ಬಿಡುವದಿಲ್ಲ ಎಂದುಹೇಳಿದರು, ಹಿಂದಿನ ಶಾಸಕ ದಿ.ಸಿದ್ದು ನ್ಯಾಮಗೌಡರು ವಿವಿಯ ಸ್ಥಾಪನೆಗೆ ಶ್ರಮಿಸಿದ್ದಾರೆ ಅದರಂತೆ ಈಗಿನ ಶಾಸಕ ಜಗದೀಶ ಗುಡಗುಂಟಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿಯವರು ಸರ್ಕಾರದ ಗಮನ ಸೆಳೆದಿದ್ದು ಶ್ಲಾಘನೀಯ ವೆಂದರು.
ಪಕ್ಷಾತೀತವಾಗಿ ಎಲ್ಲರೂ ವಿವಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ತಾವು ಸಹ ಕುಲಾಧಿಪತಿಯಾಗಿರುವ ರಾಜ್ಯಪಾಲರಿಗೆ ಈ ಕುರಿತು ಮನವಿ ಸಲ್ಲಿಸಿದ್ದು ಯಾವುದೇ ಕಾರಣಕ್ಕೆ ವಿವಿಯನ್ನು ರದ್ದುಪಡಿಸದಂತೆ ಆಗ್ರಹಿಸಿದ್ದಾಗಿ ತಿಳಿಸಿದರು.ಮುಳುಗಡೆ ಪ್ರದೇಶವಾಗಿರುವ ಜಮಖಂಡಿಯ ಜನರು ಜಮೀನು, ಮನೆ, ಆಸ್ತಿ ಕಳೆದು ಕೊಂಡಿದ್ದೇವೆ ಇನ್ನು ಉನ್ನತ ಶಿಕ್ಷಣವನ್ನು ಕಸಿಯಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು. ಸ್ವಂತ ಕಟ್ಟಡವಿದೆ. ಸಾಕಷ್ಟು ಅನುದಾನವಿದೆ. ಸ್ವಂತಕರ್ಚಿನಲ್ಲಿ ವಿವಿಯನ್ನು ನಡೆಸಿದ್ದೇವೆ ಎಂಬುದನ್ನು ಸರ್ಕಾರ ಅರ್ಥ ಮಾಢಿಕೊಳ್ಳಬೇಕು,ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಹೋರಾಟ ನಡೆಸುವ ಸ್ಥಿತಿ ನಿರ್ಮಾಣ ಮಾಡಿದ್ದು ಖಂಡನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕ ಎಂ.ಡಿ.ಇಂಡಿಕರ ಮಾತನಾಡಿ, ಸರ್ಕಾರ ಬಾಗಲಕೋಟೆ ವಿವಿಯ ವಿಲೀನದ ನಿಲುವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಡಿ.ಸಂತಿ ಮಾತನಾಡಿದರು. ಬಸವ ಸಮಿತಿಯ ರವಿ,ತೇಲಿ, ಪ್ರದೀಪ ಮೆಟಗುಡ್ಡ ವಿದ್ಯಾರ್ಥಿಗಳು ಇದ್ದರು

0 Comments